Translate in your Language

Friday, June 24, 2016

ಭಾರತೀಯ ತಂಡಕ್ಕೆ ಅನಿಲ್ ಕುಂಭ್ಳೆ ಕೋಚ್

ಭಾರತೀಯ ತಂಡಕ್ಕೆ ನಮ್ಮ  ಅನಿಲ್ ಕುಂಭ್ಳೆ ಕೋಚ್ ಆಗಿ ಆಯ್ಕೆಯಾಗಿರುವುದು ಕನ್ನಡಿಗರೆಲ್ಲರ ಸಂತೋಷವನ್ನು ಹೆಚ್ಚಿಸಿದೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಕನ್ನಡಿಗನೊಬ್ಬ ಕೋಚ್ ಆಗಿರುವ ಅನಿಲ್ ಕುಂಬ್ಳೆ ಅವರು ಮೊದಲ ಕನ್ನಡಿಗ. ಸ್ಪಿನ್ನರ್ ಮಾಂತ್ರಿಕ ಅನಿಲ್ ಕುಂಭ್ಳೆ  ಭಾರತೀಯ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬುವ ಎಲ್ಲಾ ಗುಣಗಳನ್ನು ಹೊಂದಿರುವ ಶ್ರೇಷ್ಟ ವ್ಯಕ್ತಿ ಅವರಿಗೆ ನಮ್ಮ ಪರವಾಗಿ ಹಾರ್ಧಿಕ ಅಭಿನಂದನೆಗಳು .


ಮತ್ತೊಬ್ಬ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಕೂಡ ಭಾರತದ Under 19, ಭಾರತ A ತಂಡದ ಕೋಚ್ ಆಗಿರುವುದು ನಮಗೆಲ್ಲಾ ಗೊತ್ತೇ ಇದೆ. ಹಾಗೂ ಫಾಸ್ಟ್ ಬೌಲರ್ ವೆಂಕಟೇಶ್ ಪ್ರಾಸಾದ್ ಜೂನಿಯರ್ಸ್ ತಂಡದ ಆಯ್ಕೆ ಸಮಿತಿಯ ಮುಕ್ಯಸ್ತರಾಗಿದ್ದು,  ಕನ್ನಡದ ಈ ತ್ರಿಮೂರ್ತಿಗಳು ನಮ್ಮ ದೇಶದ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಶಕ್ತಿ ತುಂಬಿ ತಂಡವನ್ನು ಸಬಲಗೊಳಿಸುವುದರಲ್ಲಿ ಎರಡು ಮಾತಿಲ್ಲ .

No comments:

Post a Comment