Translate in your Language

Friday, December 12, 2014

ರಜನಿಕಾಂತ್ ಅವರ 65ನೇ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

1950 ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಮರಾಠಿ ಕುಟುಂಬವೊಂದರಲ್ಲಿ ಹುಟ್ಟಿದ ರಜನಿಕಾಂತ್ ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಇಬ್ಬರು ಅಣ್ಣಂದಿರು ಮತ್ತು ಓರ್ವ ಅಕ್ಕನ ಮುದ್ದಿನ ತಮ್ಮ ಈ ‘ತಲೈವಾ’ .

ಬೆಂಗಳೂರಿನ ಹನುಮಂತನಗರ ತೆಕ್ಕೆಯಲ್ಲಿರುವ ಗವಿಪುರಂ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ  ಶಿಕ್ಷಣ ಪಡೆದ ಶಿವಾಜಿಗೆ ಕ್ರಿಕೆಟ್, ಫುಟ್ಬಾಲ್ ಮತ್ತು ಬ್ಯಾಸ್ಕೆಟ್ಬಾಲ್ ಕ್ರೀಡೆಗಳಲ್ಲಿ ಅತೀವ ಆಸಕ್ತಿಯಿತ್ತು. ಇದೇ ಅವಧಿಯಲ್ಲಿ ರಾಮಕೃಷ್ಣ ಮಠದ ಸಾಂಗತ್ಯವೂ ದೊರೆತು, ವೇದಗಳು, ಭಾರತೀಯ ಸಂಪ್ರದಾಯ ಮತ್ತು ಇತಿಹಾಸಿಕ ಕಲಿಕೆಗೆ ಒಡ್ಡಿಕೊಂಡರು, ಅಧ್ಯಾತ್ಮ ಪ್ರಜ್ಞೆಯೂ ಮೊಳೆಯಿತು. ಕಲಿಕೆಯ ಆಸಕ್ತಿ ಮತ್ತಷ್ಟು ವಿಸ್ತರಿಸಿ, ಮಠದಲ್ಲಿ ಪ್ರದರ್ಶನಗೊಂಡ ಮಹಾಭಾರತ ನಾಟಕದಲ್ಲಿ ಏಕಲವ್ಯನ ಸ್ನೇಹಿತನ ಪಾತ್ರವನ್ನು ನಿರ್ವಹಿಸಿದರು, ಇದಕ್ಕೆ ಪ್ರೇಕ್ಷಕರ ಮೆಚ್ಚುಗೆಯೂ ದೊರೆಯಿತು. ವರಕವಿ ದ.ರಾ.ಬೇಂದ್ರೆಯವರೂ ಅವರ ಪೈಕೆ ಒಬ್ಬರಾಗಿದ್ದರು.

ಆರನೇ ತರಗತಿಯ ನಂತರ ಆಚಾರ್ಯ ಪಬ್ಲಿಕ್ ಸ್ಕೂಲಿಗೆ ದಾಖಲಾದ ಶಿವಾಜಿ, ಪಿಯುಸಿ ಸಂಪೂರ್ಣ ಗೊಳ್ಳುವವರೆಗೂ ಅಲ್ಲೇ ವಿದ್ಯಾಭ್ಯಾಸ ಮುಂದುವರಿಸಿದರು. ನಾಟಕಾಭಿನಯ ಪರ್ವ ಇಲ್ಲೂ ಮುಂದುವರಿಯಿತು. ಕುರುಕ್ಷೆತ್ರ ನಾಟಕದಲ್ಲಿ ಅವರು ದುರ್ಯೋಧನನ ಪಾತ್ರ ನಿರ್ವಹಿಸಿದ್ದು ಈ ಅವಧಿಯಲ್ಲೇ.

ವಿದ್ಯಾಭ್ಯಾಸ ಮುಗಿಸಿದ ನಂತರ ಬೆಂಗಳೂರು ಹಾಗೂ ಮದ್ರಾಸಿನಲ್ಲಿ ಸಣ್ಣಪುಟ್ಟ ಉದ್ಯೋಗಗಳಲ್ಲಿ ತೊಡಗಿಸಿಕೊಂಡ ಶಿವಾಜಿ, ಕೊನೆಗೆ ನೆಲೆಗೊಂಡಿದ್ದು ಬೆಂಗಳೂರು ನಗರ ಸಾರಿಗೆ ಬಸ್ ಕಂಡಕ್ಟರ್ ಆಗಿ. ನಾಟಕದ ಹುಚ್ಚು ಇಲ್ಲೂ ಬಿಡಲಿಲ್ಲ, ಬದಲಿಗೆ ಹೆಚ್ಚಾಯಿತು. ಆ ಅವಧಿಯಲ್ಲೇ, ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಮದ್ರಾಸ್ ಫಿಲ್ಮ್ ಇನ್ ಸ್ಟಿಟ್ಯೂಟ್ ನೀಡಿದ ಚಲನಚಿತ್ರ ಅಭಿನಯದ ಕೋರ್ಸುಗಳ ಜಾಹೀರಾತು ಶಿವಾಜಿ ಕಣ್ಣಿಗೆ ಬಿತ್ತು. ಫಿಲ್ಮ್ ಇನ್ ಸ್ಟಿಟ್ಯೂಟ್  ಸೇರಬೇಕೆಂಬ ಶಿವಾಜಿ ತುಡಿತ ಹಾಗು ನಿರ್ಧಾರಕ್ಕೆ ಕುಟುಂಬಿಕ ಸಂಪೂರ್ಣ ಸಹಮತ ಇರಲಿಲ್ಲ. ಆಗ ಆಪದ್ಬಾಂಧವರಾಗಿ ಬಂದವರೇ ರಾಜ್ ಬಹಾದುರ್! ಇವರು ಶಿವಾಜಿಯ ಸ್ನೇಹಿತರು ಮಾತ್ರವಲ್ಲ, ಸಹೋದ್ಯೋಗಿ ಕೂಡ ಆಗಿದ್ದರು. ‘ಕಂಡಕ್ಟರ್’ ಶಿವಾಜಿಯ ಬಸ್ಸಿಗೆ ಡ್ರೈವರ್ ಆಗಿದ್ದವರು ಬಹಾದುರ್. ಇನ್ ಸ್ಟಿಟ್ಯೂಟ್ ಸೇರಬೇಕೆಂಬ ಶಿವಾಜಿ ಬಯಕೆಗೆ ಒತ್ತಾಸೆಯಾಗಿ ನಿಂತ ಬಹಾದುರ್ ಅವರಿಗೆ ಆರ್ಥಿಕ ನೆರವನ್ನೂ ನೀಡಿದರು.
ಕೆ ಬಾಲಚಂದರ್ ಕಮಲ ಹಾಸನ್ ಜೊತೆ ರಜನಿಕಾಂತ್

ಇನ್ ಸ್ಟಿಟ್ಯೂಟ್ ನಲ್ಲಿ ನಾಟಕವೊಂದನ್ನು ಅಭಿನಯಿಸುವಾಗ ಮತ್ತೊಬ್ಬ ಕ್ರಿಯಾಶೀಲ ವ್ಯಕ್ತಿಯ ದೃಷ್ಟಿ ಶಿವಾಜಿ ಮೇಲೆ ಬಿತ್ತು. ಅವರೇ ತಮಿಳಿನ ಖ್ಯಾತ ಚಿತ್ರ ನಿರ್ದೇಶಕ ಕೆ.ಬಾಲಚಂದರ್. ಈ ಸಮ್ಮಿಲನ ಶಿವಾಜಿಯ ಚಿತ್ರರಂಗ ಪ್ರವೇಶಕ್ಕೆ ನಾಂದಿಯಾಯಿತು. ಶಿವಾಜಿ ರಾವ್ ಗಾಯಕ್ವಡ್ ಆಗಿದ್ದಾತನಿಗೆ ರಜನಿಕಾಂತ್ ಎಂದು ನಾಮಕಾರಣ ಮಾಡಿದ ಬಾಲಚಂದರ್, ತಮ್ಮ ‘ಅಪೂರ್ವ ರಾಗಂಗಳ್’ ಚಿತ್ರದಲ್ಲಿ ಪುಟ್ಟಪಾತ್ರವಿತ್ತು ಹರಿಸಿದರು. ಚಿತ್ರ ತನ್ನ ಕಥಾವಸ್ತುವಿನಿಂದಾಗಿ ವಿವಾದ ಹುಟ್ಟುಹಾಕಿದರೂ, ವಿಮರ್ಶಕರ ಮೆಚ್ಚುಗೆ ಪಡೆದು ಮೂರು ರಾಷ್ಟ್ರಪ್ರಶಸ್ತಿಗಳನ್ನೂ ಗಳಿಸಿತು.


ಸೂಪರ್ ಸ್ಟಾರ್ ರಜನಿಕಾಂತ್ ನಿಮಗೆಷ್ಟು ಗೊತ್ತು ?


No comments:

Post a Comment